ಇಂದಿನ ಪ್ರಭುತ್ವವು ಕಾನೂನುಗಳನ್ನು ರಚಿಸಿಕೊಂಡು ಆಳ್ವಿಕೆ ನಡೆಸುತ್ತದೆ. ಪ್ರಜೆಗಳು ಕಾನೂನುಗಳನ್ನು ಗೌರವಿಸುವುದರ ಮೂಲಕ ಪ್ರಭುತ್ವವನ್ನು ಗೌರವಿಸಬೇಕೆನ್ನುತ್ತದೆ. ಆದರೆ ಭಾರತೀಯರು ಕಾನೂನುಗಳನ್ನು ಗೌರವಿಸುವಂತೆ ಕಾಣುವುದಿಲ್ಲ. ಬದಲಾಗಿ ಅವನ್ನು ಉಲ್ಲಂಘಿಸುವುದು ಹಾಗೂ ದುರುಪಯೋಗಪಡಿಸಿಕೊಳ್ಳುವುದರಲ್ಲೇ ಹೆಚ್ಚು ಆಸಕ್ತರಾಗಿದ್ದಾರೆ. ಏಕೆಂದರೆ ಕಾನೂನಿನ ಕಲ್ಪನೆ ಭಾರತೀಯ ಸಂಸ್ಕೃತಿಗೆ ಪರಕೀಯವಾದುದು.…
-
-
ಮನುಷ್ಯನು ನೈತಿಕ ಕ್ರಿಯೆಗಳನ್ನು ಜರುಗಿಸಬೇಕಾದರೆ ಒಂದಿಲ್ಲೊಂದು ನೈತಿಕ ಸಿದ್ಧಾಂತಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದಾಗಿ ಪಾಶ್ಚಾತ್ಯ ಸಂಸ್ಕೃತಿ ತಿಳಿಸುತ್ತದೆ. ಹಾಗೂ ವ್ಯಕ್ತಿಯೊಬ್ಬನ ನೈತಿಕತೆಗೆ ಸಿದ್ಧಾಂತಗಳೇ ಮಾನದಂಡ ಎಂದೂ ಅದು ಹೇಳುತ್ತದೆ. ಭಾರತೀಯರು ತಮ್ಮ ನೈತಿಕ ಕ್ರಿಯೆಗಳನ್ನು ಸಿದ್ಧಾಂತಗಳ ಸಹಾಯದಿಂದ ಜರುಗಿಸುವುದಿಲ್ಲ. ಈ ಎರಡು…
-
ಬುದ್ಧಿಜೀವಿಗಳ ಮೂಢನಂಬಿಕೆಗಳು
ಸಾರ್ವತ್ರಿಕ ನಿಯಮಗಳಿಗೆ ಕಟ್ಟುಬಿದ್ದ ನಾರ್ಮೇಟಿವ್ ಜಗತ್ತು ಹಾಗೂ ಭಾರತೀಯ ಸಂದರ್ಭ
5 viewsಇಂಗ್ಲೀಷಿನಲ್ಲಿ ought ಎಂಬ ಸಹಾಯಕ ಕ್ರಿಯಾಪದಗಳನ್ನು ಬಳಸಿ ರಚಿಸಿದ ವಾಕ್ಯಗಳನ್ನು ನಾರ್ಮೇಟಿವ್ ವಾಕ್ಯಗಳು ಎನ್ನುತ್ತಾರೆ. ಅಂದರೆ ಸಂದರ್ಭಾತೀತವಾಗಿ, ಸಾರ್ವತ್ರಿಕವಾಗಿ ಹೀಗೆ ಮಾಡಬೇಕು ಅಥವಾ ಮಾಡಬಾರದು ಎಂಬುದನ್ನು ವಿಧಿಸುವ ವಾಕ್ಯಗಳು. ಭಾರತೀಯ ಅಥವಾ ಏಶಿಯಾದ ಸಂಸ್ಕೃತಿಗಳಲ್ಲಿ ought ಗೆ ಸಂವಾದಿಯಾದ ಪರಿಕಲ್ಪನೆಗಳಿಲ್ಲ ಹಾಗೂ…
-
ಪಾಶ್ಚಾತ್ಯರು ತಮ್ಮ ಜೀವನದಲ್ಲಿ ಒಂದು ನೈತಿಕ ವಲಯವನ್ನು ರಚಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಒಂದಿಲ್ಲೊಂದು ನೈತಿಕ ಸಿದ್ಧಾಂತಗಳ ಮಾರ್ಗದರ್ಶನದಲ್ಲಿ ನಡೆಸುತ್ತಾರೆ. ಹಾಗೂ ಒಬ್ಬನು ನೀತಿವಂತನಾಗಿರಬೇಕಾದರೆ ಇಂಥ ಸಿದ್ಧಾಂತಗಳು ನಿರ್ಣಾಯಕವಾಗಿವೆ. ಈ ಹಿನ್ನೆಲೆಯಿಂದ ಅವರು ಭಾರತೀಯ ಸಂಸ್ಕೃತಿಯನ್ನು ನೋಡಿದಾಗ ಇದೊಂದು ನೀತಿ ನಿಯಮಗಳೇ…
-
ಭಾರತದಲ್ಲಿ ಭ್ರಷ್ಟಾಚಾರವು ತಾಂಡವವಾಡುತ್ತಿದೆ ಎಂಬುದು ಅಂತಾರಾಷ್ಟ್ರೀಯ ಸುದ್ದಿ. ಪಾಶ್ಚಾತ್ಯರು ಭಾರತೀಯ ಹೀದನ್ ಸಂಸ್ಕೃತಿಯ ಕುರಿತ ಪೂರ್ವಾಗ್ರಹದಿಂದ ಇಲ್ಲಿನ ರಿಲಿಜನ್ನು ಹಾಗೂ ಸಮಾಜಗಳು ಅನೈತಿಕತೆಯ ತಳಹದಿಯ ಮೇಲೆ ನಿಂತಿವೆ ಎಂಬುದಾಗಿ ಭಾವಿಸಿದರು. ಹಾಗಾಗಿ ಭಾರತೀಯರ ಅನೈತಿಕತೆಗೆ ಭ್ರಷ್ಟಾಚಾರವು ಒಂದು ಲಕ್ಷಣವಾಗಿ ಅವರಿಗೆ ಕಾಣಿಸಿತು.…
-
ಭಾರತೀಯ ಸಮಾಜದ ಕುರಿತ ಅನೇಕ ಚಿತ್ರಣಗಳು ಪಾಶ್ಚಾತ್ಯ ಸ್ಟೀರಿಯೋಟೈಪುಗಳನ್ನು ಅವಲಂಬಿಸಿವೆ. ಆದರೆ ಪಾಶ್ಚಾತ್ಯರಿಗೆ ಸ್ಟೀರಿಯೋಟೈಪುಗಳು ಸತ್ಯ ಹೇಳಿಕೆಗಳಲ್ಲ. ಹಾಗಿದ್ದೂ ಅವುಗಳನ್ನು ಅವರು ಏಕೆ ಉಪಯೋಗಿಸುತ್ತಾರೆ? ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಸ್ಟೀರಿಯೋಟೈಪುಗಳ ಸ್ವರೂಪವೇನು ಹಾಗೂ ಪಾತ್ರವೇನು? ಭಾರತೀಯರು ಅವನ್ನು ಹೇಗೆ ಮತ್ತು ಏಕೆ ಬಳಸುತ್ತಾರೆ?…
-
ಕಳೆದ ನೂರಾರು ವರ್ಷಗಳಿಂದ ಭಾರತದಲ್ಲಿರುವ ಜಾತಿ ವ್ಯವಸ್ಥೆಯ ಸ್ವರೂಪ ಹಾಗೂ ಕಾರಣಗಳನ್ನು ಕುರಿತು ಸಂಶೋಧನೆಗಳು ನಡೆಯುತ್ತಿವೆ. ಆದರೆ ಸಮಾಜ ವಿಜ್ಞಾನಿಗಳು ಜಾತಿ ವ್ಯವಸ್ಥೆ ಎಂದರೆ ಏನು ಎಂಬುದನ್ನು ಇಂದಿಗೂ ಕೂಡ ಸಾಕ್ಷ್ಯಾಧಾರಗಳನ್ನು ನೀಡಿ ವಿವರಿಸಲು ಸೋಲುತ್ತಾರೆ. ಹಾಗಾದರೆ ಈ ಸಮಸ್ಯೆ ಎಲ್ಲಿಂದ…
-
ಭಾರತೀಯ ಸಮಾಜವು ತನ್ನ ಜಾತಿ ವ್ಯವಸ್ಥೆಯ ಕಾರಣದಿಂದಾಗಿ ಬದಲಾವಣೆಯನ್ನು ಕಾಣದೇ ಸಾವಿರಾರು ವರ್ಷಗಳ ವರೆಗೆ ಹಾಗೇ ಉಳಿದುಕೊಂಡು ಬಂದಿದೆ ಎಂಬ ಅಭಿಪ್ರಾಯವು ಆಧುನಿಕ ವಿದ್ಯಾವಂತರಲ್ಲಿದೆ. ನಮ್ಮ ಇತಿಹಾಸ ಪುಸ್ತಕಗಳೂ ಅದನ್ನೇ ತಿಳಿಸುತ್ತವೆ. ಆದರೆ ಯಾವುದೇ ಸಮಾಜವಾದರೂ ಬದಲಾವಣೆಯಿಲ್ಲದೇ ಸಾವಿರಾರು ವರ್ಷ ಇದ್ದಹಾಗೇ…
-
ಇಂದಿನ ಪಠ್ಯಪುಸ್ತಕಗಳ ಇತಿಹಾಸವು ಬುದ್ಧನು ಬ್ರಾಹ್ಮಣ ಪುರೋಹಿತಶಾಹಿ ಹಾಗೂ ಜಾತಿವ್ಯವಸ್ಥೆಯ ವಿರುದ್ಧ ಪ್ರತಿಭಟಿಸಲಿಕ್ಕೆ ಬೌಧ್ಧ ಧರ್ಮವನ್ನು ಸ್ಥಾಪಿಸಿದ ಎನ್ನುತ್ತದೆ. ಆದರೆ ಬೌದ್ಧ ಗ್ರಂಥಗಳು ತಿಳಿಸುವ ಪ್ರಕಾರ ಬುದ್ಧನು ಬ್ರಾಹ್ಮಣರು ಹಾಗೂ ವರ್ಣಗಳನ್ನು ಅಲ್ಲಗಳೆದಿರಲಿಲ್ಲ. ಇಂಥ ನಿರೂಪಣೆಗಳು ಬೆಳೆದು ಬರುವುದಕ್ಕೆ ವಸಾಹತು ಕಾಲದ…
-
ಪ್ರಾಚೀನ ಭಾರತದಲ್ಲಿ ವೈದಿಕ ಶಾಹಿಯ ವಿರುದ್ಧ ಆಗಾಗ ಪ್ರತಿಭಟನೆಗಳು ನಡೆದಿವೆ ಎನ್ನಲಾಗುತ್ತದೆ. ಅವೆಂದರೆ ಬೌದ್ಧ, ಜೈನ, ಚಾರ್ವಾಕ, ವೀರಶೈವ, ಇತ್ಯಾದಿ. ಈ ಪ್ರತಿಭಟನೆಗಳಿಗೆಲ್ಲ ಕೆಲವು ಸಾಮಾನ್ಯ ಲಕ್ಷಣಗಳನ್ನೂ ಆರೋಪಿಸಲಾಗಿದೆ. ಆದರೆ ಈ ಲಕ್ಷಣಗಳೆಲ್ಲವೂ ಯುರೋಪಿನ ಪ್ರೊಟೆಸ್ಟಾಂಟ್ ಚಳವಳಿಗೆ ಆರೋಪಿಸಿದ ಲಕ್ಷಣಗಳಾಗಿವೆ. ಭಾರತದಲ್ಲಿ…