Home ನಮ್ಮ ಬಗ್ಗೆ

ನಮ್ಮ ಬಗ್ಗೆ

by wpadmin

Indian Alternatives – IA (ಭಾರತೀಯ ಪರ್ಯಾಯ) ಭಾರತೀಯ ಸಂಸ್ಕೃತಿಯ ಬಗ್ಗೆ ಇರುವ ಚರ್ಚೆಗಳನ್ನು ಕುರಿತು ಚಿಂತನೆಯನ್ನು ಬೆಳೆಸಬೇಕೆಂಬ ಆಶಯವನ್ನು ಹೊಂದಿರುವ ವೇದಿಕೆಯಾಗಿದೆ. ಇಲ್ಲಿನ ಚಿಂತನೆಗಳು ಕೇವಲ ಭಾರತದ ಸುತ್ತ-ಮುತ್ತಲಿನ ವಿದ್ಯಮಾನಗಳನ್ನು ಕುರಿತಾಗಿರದೇ ಜಗತ್ತಿನಾದ್ಯಂತ ನಡೆಯುವ ಆಗುಹೋಗುಗಳನ್ನೂ ಅರ್ಥಯಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನವಾಗಿದೆ. ಭಾರತ ಹಾಗೂ ವಿಶ್ವದ ಬಗ್ಗೆ ಒಟ್ಟಾಗಿ ಸೇರಿ ಚಿಂತನೆಯನ್ನು ಮಾಡಲು ಆಸಕ್ತಿ ಇರುವವರೆಲ್ಲರಿಗೂ IA (Indian Alternatives) ಒಂದು ತಟಸ್ಥ ವೇದಿಕೆಯಾಗಿದೆ. ಇಲ್ಲಿನ ಚಿಂತನೆಗಳಲ್ಲಿ ಭಾಗವಹಿಸುವವರು ಸಂಶೋಧನಾ ವಿದ್ಯಾರ್ಥಿಗಳು, ವಿದ್ವಾಂಸರು, ಚಳವಳಿಕಾರರು, ವಿಜ್ಞಾನಿಗಳು ಮುಂತಾದವರಾಗಿರುತ್ತಾರೆ. 

ನಮ್ಮನ್ನು ಕಾಡುವ ಜಗತ್ತಿನ ಸಮಸ್ಯೆಗಳನ್ನು ಕುರಿತು ಪ್ರಸ್ತುತ ಬೌದ್ಧಿಕ ವಲಯವು ಹೇಗೆ ಆಲೋಚಿಸುತ್ತದೆ ಎಂಬುದರ ಪರಿಶೀಲನೆಯನ್ನು ಈ ವೇದಿಕೆಯು ಮಾಡಲಿಚ್ಛಿಸುತ್ತದೆ. ಹೀಗೆ ಮಾಡುವುದರ ಮೂಲಕ ಸಾಂಸ್ಕೃತಿಕ ವ್ಯತ್ಯಾಸವನ್ನು ಅರ್ಥೈಸುವ ಸಾಧ್ಯತೆಗಳನ್ನು ತೆರೆದಿಡುವುದೇ ಇಲ್ಲಿನ ಚಿಂತನೆಗಳ ಹಿಂದಿರುವ ಆಲೋಚನೆಯಾಗಿದೆ. ಈ ಪ್ರಯತ್ನಕ್ಕೆ ಒಂದು ಸೈದ್ಧಾಂತಿಕ ಹಿನ್ನೆಲೆ ಇದೆ: ನಮ್ಮ ಬೌದ್ಧಿಕ ಜಗತ್ತು ಯುರೋಪಿನ ಸಂಸ್ಕೃತಿಯು ತಮ್ಮ ಸಂಸ್ಕೃತಿ ಹಾಗೂ ಇತರೇ ಸಂಸ್ಕೃತಿಗಳನ್ನು ಗ್ರಹಿಸಿದ ಆಧಾರದ ಮೇಲೆ ರಚನೆಯಾಗಿದೆ. ಹೀಗಾಗಿ ಜಗತ್ತಿನ ಸಂಸ್ಕೃತಿಗಳ ಬಗ್ಗೆ ಇರುವ ಪ್ರಸ್ತುತ ಸಮಾಜ ವಿಜ್ಞಾನದ ತಿಳಿವಳಿಕೆಯು ಯುರೋಪಿನ ಅನುಭವವಾಗಿದೆಯಷ್ಟೆ. ಈ ಕಾರಣದಿಂದ ಯುರೋಪಿನ ವಿವರಣೆಗಳಿಗೆ ಪರ್ಯಾಯವಾದ ವಿವರಣೆಗಳನ್ನು ಕಟ್ಟುವ ಪ್ರಯತ್ನಗಳು ನಡೆಯುತ್ತಿದ್ದರೂ, ಬಹಳಷ್ಟು ಚರ್ಚೆಗಳು ಮೇಲೆ ಹೇಳಿರುವ ಗ್ರಹಿಕೆಯನ್ನಾಧರಿಸಿರುತ್ತವೆ.

 IA ಎಂಬ ಈ ವೇದಿಕೆಯಲ್ಲಿ, ಭಾರತೀಯ ಸಂಸ್ಕೃತಿಯ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳನ್ನು ಬಹುಭಾಷೆಗಳಲ್ಲಿ ಪ್ರಕಟಿಸಲಾಗುತ್ತದೆ. ಅಲ್ಲದೇ ಇಲ್ಲಿ ಆಹ್ವಾನಿತ ಲೇಖನಗಳನ್ನು ಮಾತ್ರ ಪ್ರಕಟಿಸಲಾಗುತ್ತದೆ. ಇಲ್ಲಿ  ಜನಪ್ರಿಯ ಲೇಖನಗಳಲ್ಲದೇ ಬೌದ್ಧಿಕ ಸ್ವರೂಪದ ಸುದೀರ್ಘ ಲೇಖನಗಳು,  (ಈಗಾಗಲೇ ಪ್ರಕಟವಾಗಿರುವ ಅಥವಾ ಹೊಸ ಲೇಖನಗಳನ್ನು) ವಿಡಿಯೋಗಳು ಇರುತ್ತವೆ. 

ಭಾರತೀಯ ಸಂಸ್ಕೃತಿಯ ವಿಚಾರದಲ್ಲಿ ಉತ್ಸಾಹಿಗಳಾಗಿರುವ ಸಣ್ಣದೊಂದು ಗುಂಪಿನವರಿಂದ ಜನವರಿ ೨೦೨೧ರಲ್ಲಿ IA ಯನ್ನು ಪ್ರಾರಂಭಿಸಲಾಯಿತು.

ಇಲ್ಲಿನ ಲೇಖನಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಅವುಗಳ ಲೇಖಕರದ್ದೇ ಆಗಿದ್ದು, ಅವು ಅಗತ್ಯವಾಗಿ ಸಂಪಾದಕೀಯ ಸಮಿತಿಯ ಸದಸ್ಯರದ್ದು ಆಗಿರಬೇಕಾಗಿಲ್ಲ.

Message Us on WhatsApp