ಹಿಂದೂ ಮಹಿಳೆಯ ಸ್ಥಾನಮಾನದ ಕುರಿತ ಬರವಣಿಗೆಗಳು ಬರತೊಡಗಿದ್ದು ವಸಾಹತು ಕಾಲದ ನಂತರ. ಅದರಲ್ಲೂ ಭಾರತೀಯ ಮಹಿಳೆಯರು ಸತಿ ಪದ್ಧತಿಯಂಥ ಅಮಾನುಷ ಆಚರಣೆಗೆ ಬಲಿಯಾಗಿದ್ದಾರೆ. ವಿಧವಾ ವಿವಾಹ ನಿಷೇಧ, ಬಾಲ್ಯ ವಿವಾಹ, ಶಿಕ್ಷಣ ನೀಡದಿರುವುದು, ಇತ್ಯಾದಿ ಸಾಂಪ್ರದಾಯಿಕ ರೂಢಿಗಳಿಂದಾಗಿ ಆಕೆ ಪುರುಷ ವರ್ಗದಿಂದ…
-
-
ಈ ಲೇಖನವನ್ನು ಬರೆಯುತ್ತಿರುವ ಸಂದರ್ಭದಲ್ಲಿ ಎರಡು ವಿಭಿನ್ನ ದೇವಾಲಯಗಳಿಗೆ ಸ್ತ್ರೀಯರ ಪ್ರವೇಶದ ಹೋರಾಟಗಳು ನಡೆಯುತ್ತಿವೆ. ಅವೆಂದರೆ ಶಬರಿಮಲೆ ಹಾಗೂ ಶನಿ ಶಿಂಗ್ಲಾಪೂರ. ಈ ಹೋರಾಟವನ್ನು ನಡೆಸುತ್ತಿರುವವರು ಪ್ರಗತಿಪರರು ಹಾಗೂ ಸ್ತ್ರೀವಾದಿಗಳು. ಈ ಸಂದರ್ಭದಲ್ಲಿ ಅವರು ಎತ್ತುತ್ತಿರುವ ಚರ್ಚೆಯನ್ನು ಗಮನಿಸಿದಾಗ ಭಾರತೀಯ ಸಂಸ್ಕೃತಿಯ…
-
ಇತ್ತೀಚೆಗೆ ಮೈಸೂರು ಸಿಂಹಾಸನಕ್ಕೆ ಉತ್ತರಾಧಿಕಾರಿಯನ್ನು ನಿಯಮಿಸಿ ಪಟ್ಟಾಬಿಷೇಕವನ್ನು ನಡೆಸಿದ ಸಂದರ್ಭದಲ್ಲಿ ಕರ್ನಾಟಕದ ಮಾಧ್ಯಮಗಳ ತುಂಬೆಲ್ಲ ಪರ ವಿರೋಧ ಅಭಿಪ್ರಾಯಗಳ ಸುರಿಮಳೆಯಾಯಿತು. ಕೆಲವು ರಾಜಕಾರಣಿಗಳು ಆ ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಲು ಹಿಂಜರಿದರು. ಮತ್ತೂ ಕೆಲವರು ತಾವು ಭಾಗವಹಿಸಿದ್ದನ್ನು ಜನರ ವಿಶೇಷ ಗಮನಕ್ಕೆ ತರಲು ಪ್ರಯತ್ನಿಸಿದರು.…
-
ಆರ್ಯರು ಭಾರತಕ್ಕೆ ಬಂದ ನಂತರ ಪರಿಶುದ್ಧತೆಯನ್ನು ಹಾಗೂ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಲು ವರ್ಣ/ಜಾತಿಗಳನ್ನು ಹುಟ್ಟುಹಾಕಿದರು ಎಂಬ ಸಿದ್ಧಾಂತವು ಇಂದು ಜನಪ್ರಿಯವಾಗಿದೆ. ಭಾರತೀಯ ಮೂಲದ ಜನರನ್ನೆಲ್ಲ ಶೂದ್ರ ಹಾಗೂ ಪಂಚಮರೆಂದು ಈ ವ್ಯವಸ್ಥೆಯಲ್ಲಿ ಕೆಳಜಾತಿಗಳನ್ನಾಗಿ ಮಾಡಲಾಯಿತು. ಹಾಗೂ ಆರ್ಯ ಹಿನ್ನೆಲೆಯ ಮೇಲಿನ ಮೂರು ವರ್ಣಗಳು…
-
ನಾನು ಇತ್ತೀಚೆಗೆ ಅಜಂತಾ ಗುಹಾಲಯಗಳಿಗೆ ಹೋಗಿದ್ದೆ. ಅಲ್ಲಿನ ವರ್ಣಚಿತ್ರಗಳನ್ನು ನೋಡುತ್ತಿದ್ದಾಗ ಈಗಾಗಲೇ ಗಮನಿಸಿದ ಸಂಗತಿಯೊಂದು ಮತ್ತೂ ಸ್ಪುಟವಾಯಿತು. ಅದೆಂದರೆ ಅಲ್ಲಿನ ಮನುಷ್ಯಾಕೃತಿಗಳಲ್ಲಿ ಕಾಣಿಸಿದ ವರ್ಣವೈವಿಧ್ಯ. ಗೌರವರ್ಣದಿಂದ ಹಿಡಿದು ಕಂದು, ಕಪ್ಪು ವರ್ಣಗಳವರೆಗೆ ನಾನಾ ಪ್ರಕಾರದ ಮೈಬಣ್ಣಗಳಿಗೆ ಈ ಚಿತ್ರಗಳು ಸಾಕ್ಷಿಯಾಗಿವೆ. ಒಂದು…
-
ಇಂದು ಭೀಕ್ಷೆ ಬೇಡಿ ಜೀವಿಸುವುದು ಮನುಷ್ಯನಿಗೆ ಬರಬಹುದಾದ ಅತ್ಯಂತ ಹೀನಾಯವಾದ ಅವಸ್ಥೆಯಾಗಿದೆ. ರಟ್ಟೆಯಲ್ಲಿ ಶಕ್ತಿ ಇರುವವರೆಗೆ ಭಿಕ್ಷೆ ಸಿಗುವುದೂ ಕಷ್ಟ, ಹಾಗಾಗಿ ಅಂಗಗಳನ್ನು ಊನಗೊಳಿಸಿಕೊಂಡು ದಯನೀಯ ಸ್ಥಿತಿಯನ್ನು ತಾವೇ ತಂದುಕೊಳ್ಳುವುದು ಭಿಕ್ಷಾವೃತ್ತಿಗೆ ಲಾಭದಾಯಕ. ಸಣ್ಣ ಸಣ್ಣ ಕಂದಮ್ಮಗಳನ್ನು ಕದ್ದೊಯ್ದು ಮಾರಿ. ಅವರ…
-
ನಾನು ಅಂತರ್ಜಾತೀಯ ವಿವಾಹಗಳ ವಿರೋಧಿಯಲ್ಲ ಎಂಬ ಕೇವಿಯಟ್ ಹಾಕಿಕೊಂಡೇ ನನ್ನ ವಿಚಾರಗಳನ್ನು ಮುಂದಿಡುತ್ತಿದ್ದೇನೆ. ಅಂತರ್ಜಾತೀಯ ವಿವಾಹಗಳಿಂದಾಗಿ ಜಾತಿ ನಾಶವಾಗುತ್ತದೆ ಎಂಬ ವಾದವೊಂದಿದೆ. ನಮ್ಮ ಅನುಭವದ ಬೆಳಕಿನಲ್ಲಿ ಇದು ಎಷ್ಟು ತರ್ಕಬದ್ಧವಾಗಿದೆ ಎಂಬುದನ್ನು ಜಿಜ್ಞಾಸೆಗೊಳಪಡಿಸುವುದಷ್ಟೇ ಈ ಬರಹದ ಉದ್ದೇಶ. ಹಾಗೇ ವಾದಿಸುವವರ ಪ್ರಕಾರ…
-
ಸಾಮಾನ್ಯ ಭಾರತೀಯನೊಬ್ಬನ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿರುವ ‘ಅಯ್ಯೋ, ನನ್ನ ಕರ್ಮ!’, ‘ಮಾಡಿದುಣ್ಣೋ ಮಹರಾಯ’, ‘ಇಷ್ಟೊಂದು ಅನ್ಯಾಯ ಅನಾಚಾರ ಮಾಡಿ ಎಷ್ಟೊಂದು ಅರಾಮವಾಗಿದ್ದಾನೆ! ಹಿಂದಿನ ಜನ್ಮದಲ್ಲಿ ಏನೋ ಪುಣ್ಯ ಮಾಡಿರಬೇಕು!’ ‘ಎಲ್ಲಾ ನನ್ನ ಹಣೆಬರಹ’ ಮುಂತಾದ ವಾಕ್ಯಪ್ರಯೋಗಗಳನ್ನು ವಿವರಿಸಲು ಇಂದಿನ ಬೌದ್ಧಿಕ ಜಗತ್ತಿನಲ್ಲಿ…
-
ಭಾರತೀಯ ಇತಿಹಾಸವನ್ನು ಓದಿದ ಎಲ್ಲರಿಗೂ ಹಿಂದೂ ಪರಂಪರೆಯ ಕುರಿತು ಬಂದೇ ಬರಬಹುದಾದ ಒಂದು ಸಾಮಾನ್ಯ ಜ್ಞಾನ ಈ ಮುಂದಿನಂತಿರುತ್ತದೆ: ವೇದಗಳನ್ನು ನಿಷೇಧಿಸುವ ಮೂಲಕ ಶೂದ್ರರಿಗೆ ಹಿಂದೂಗಳ ಪವಿತ್ರಗ್ರಂಥವನ್ನು ಹಾಗೂ ಆ ಮೂಲಕ ಜ್ಞಾನವನ್ನು ನಿರಾಕರಿಸಲಾಯಿತು. ಹೀಗೆ ಜ್ಞಾನದಿಂದ ವಂಚಿತರಾದವರು ಶೂದ್ರರು ಹಾಗೂ…
-
ಶಂಕರಾಚಾರ್ಯರೆಂದರೆ ಒಂದು ವರ್ಗದ ಬುದ್ಧಿಜೀವಿಗಳಿಗೆ ಖಳನಾಯಕರು. ಭಾರತದಲ್ಲಿ ಸಮಾನತೆಯ ತತ್ವವನ್ನು ಸಾರಿದ ಬೌದ್ಧರನ್ನು ಹಿಮ್ಮೆಟ್ಟಿಸಿ ಜಾತಿವ್ಯವಸ್ಥೆಯ ಅನೈತಿಕ ನಿಯಮಗಳನ್ನು ಸಮರ್ಥಿಸಿ ಬ್ರಾಹ್ಮಣ ಪ್ರಾಬಲ್ಯವನ್ನು ಮರುಸ್ಥಾಪಿಸಿದವರೆಂದು ಅವರನ್ನು ಇಂಥವರು ಗುರುತಿಸುತ್ತಾರೆ. ಶಂಕರರು ಬ್ರಾಹ್ಮಣಶಾಹಿಯನ್ನು ಹಾಗೂ ಅದನ್ನು ಪ್ರತಿಪಾದಿಸುವ ಹಿಂದೂಯಿಸಂ ಅನ್ನು ಪುನರುತ್ಥಾನಗೊಳಿಸಿದವರು ಎಂದು…